ವಿದ್ಯುಚ್ಛಕ್ತಿ

ವಿದ್ಯುಚ್ಛಕ್ತಿ 

# ವಿದ್ಯುದಾವಿಷ್ಟಕಣಗಳು ತಮ್ಮ ಚಲನೆಯ ಸ್ಥಿತಿಯಿಂದ ಪಡೆದುಕೊಳ್ಳುವ ಶಕ್ತಿಯನ್ನು ವಿದ್ಯುಚ್ಛಕ್ತಿ ಎನ್ನುವರು.

# ವಿದ್ಯುಚ್ಛಕ್ತಿಯನ್ನು ಉಷ್ಣ, ಬೆಳಕು, ಮತ್ತಿತರ ಶಕ್ತಿ ರೂಪಗಳಿಗೆ ಸುಲಭವಾಗಿ ಪರಿವರ್ತಿಸಬಹುದು.

# ಒಂದು ರೂಪದಲ್ಲಿರುವ ಶಕ್ತಿಯನ್ನು ಇತರ ರೂಪಗಳಿಗೆ ಪರಿವರ್ತಿಸುವಾಗ ಒಟ್ಟಾರೆ ಶಕ್ತಿ ಪ್ರಮಾಣ ಹೆಚ್ಚಾಗುವುದಿಲ್ಲ. ಕಡಿಮೆಯೂ ಆಗುವುದಿಲ್ಲ. ಇದನ್ನು ಶಕ್ತಿಯ ಸಂರಕ್ಷಣೆಯ ನಿಯಮ ಎಂದು ಕರೆಯುತ್ತಾರೆ. ವಿದ್ಯುಚ್ಛಕ್ತಿ ಹರಿಯುವಾಗ ಅದು ಉಂಟುಮಾಡುವ ಪರಿಣಾಮಗಳನ್ನು ಆಧರಿಸಿ ಕೆಲವು ಕಾರ್ಯಗಳನ್ನು ಮಾಡುತ್ತೇವೆ.

# ವಿದ್ಯುಚ್ಛಕ್ತಿಯ ಅಂತರಾಷ್ಟ್ರೀಯ ಏಕಮಾನ "ಜೂಲ್". ಒಂದು ಕಿಲೋ ಜೂಲ್ = ಸಾವಿರ ಜೂಲ್ ಗಳು. (1KJ=1000J).

 

ವಿದ್ಯುತ್ ಸಾಮರ್ಥ್ಯ

# ವಿದ್ಯುಚ್ಛಕ್ತಿ ಉಪಯೋಗವಾಗುವ ದರವೇ ವಿದ್ಯುತ್ ಸಾಮರ್ಥ್ಯ. ವಿದ್ಯುಚ್ಛಕ್ತಿಯು ತಂತಿಗಳನ್ನು ಕಾಯಿಸಬಲ್ಲದು.

# ದೀಪಗಳನ್ನು ಉರಿಯುವಂತೆ, ಯಂತ್ರಗಳನ್ನು ಚಲಿಸುವಂತೆ ಮಾಡುತ್ತದೆ.

# ವಿದ್ಯುತ್ ಸಾಮರ್ಥ್ಯದ ಅಂತರಾಷ್ಟ್ರೀಯ ಏಕಮಾನ "ವ್ಯಾಟ್".

# 1 W = 1J/s ಒಂದು ಉಪಕರಣವು ಸೆಕೆಂಡಿಗೆ ಒಂದು ಜೂಲ್ ದರದಲ್ಲಿ ವಿದ್ಯುಚ್ಛಕ್ತಿಯನ್ನು ಉಪಯೋಗಿಸುತ್ತಿದ್ದಲ್ಲಿ ಅದರ ಸಾಮರ್ಥ್ಯ ಒಂದು ವ್ಯಾಟ್ ಆಗುತ್ತದೆ.

 

1. ಒಂದು ಟಿ.ವಿ 25 ಸೆಕೆಂಡುಗಳಲ್ಲಿ 1500 ಜೌಲ್ ವಿದ್ಯುಚ್ಛಕ್ತಿ ಉಪಯೋಗಿಸಿದರೆ ಟಿ.ವಿಯ ಸಾಮರ್ಥ್ಯ ಎಷ್ಟು?

P=E/t

P=1500/25

=60 w

 

ವಿದ್ಯುತ್ಪ್ರವಾಹ

# ಪ್ಲಾಸ್ಟಿಕ್ ಅಥವಾ ಮರದಂತಹ ಅವಾಹಕಗಳಲ್ಲಿ ಆವೇಶವು ನಿರ್ದಿಷ್ಟ ಪ್ರದೇಶದಲ್ಲಿ ಸ್ಥಿರವಾಗಿರುತ್ತದೆ. ಆದರೆ ಲೋಹಗಳಲ್ಲಿ ಆವೇಶವು ಚಲಿಸುತ್ತದೆ. ಆದ್ದರಿಂದ ಆವೇಶಗಳ ಚಲನೆಯನ್ನು ವಿದ್ಯುತ್ಪ್ರವಾಹ ಎಂದು ಕರೆಯುತ್ತಾರೆ.

# ಒಂದು ಕೂಲಮ್ ಪರ್ ಸೆಕೆಂಡನ್ನು ಆಂಪೆರ್ ಎನ್ನುವರು. ವಿದ್ಯತ್ಪ್ರವಾಹದ ಅಂತರಾಷ್ಟ್ರೀಯ ಏಕಮಾನ ಆಂಪೇರ್ (A).

1. ಒಂದು ವಿದ್ಯುತ್ ಕೋಶದಲ್ಲಿ 12 ಕೋಲಮ್ ಆವೇಶವು 20 ಸೆಕೆಂಡುಗಳ ಕಾಲ ಪ್ರವಹಿಸುತ್ತದೆ. ಅಂದರೆ ಕೋಶದಲ್ಲಿನ ವಿದ್ಯುತ್ಪ್ರವಾಹ ಎಷ್ಟು?

I = Q/t

I = 12/20

I = 0.6 ಕೂಲಮ್ / ಸೆಕೆಂಡ್

 

ವಿಭವಾಂತರ (ವೋಲ್ಟೇಜ್)

# ಒಂದು ಧನ ಆವೇಶವನ್ನು ಒಂದು ಋಣ ವಿದ್ಯುತ್ ಕ್ಷೇತ್ರದಲ್ಲಿ ಇರಿಸಿದಾಗ ವಿದ್ಯುತ್ ಕ್ಷೇತ್ರದಿಂದಾಗಿ ಆಕರ್ಷಣ ಬಲವು ಅದರ ಮೇಲೆ ವರ್ತಿಸುತ್ತದೆ. ಈ ಆವೇಶವನ್ನು ವಿದ್ಯುತ್ ಕ್ಷೇತ್ರದಿಂದ ದೂರ ತೆಗೆದುಕೊಂಡು ಹೋಗಬೇಕಾದರೆ ಕೆಲಸ ಮಾಡುವ ಅವಶ್ಯಕತೆವಿರುತ್ತದೆ. ಹೆಚ್ಚಿನ ಪ್ರಮಾಣದ ಆವೇಶವು ಚಲಿಸುವಂತೆ ಮಾಡುಲು ಹೆಚ್ಚಿನ ಪ್ರಮಾಣದ ಕೆಲಸದ ಅವಶ್ಯವಿರುತ್ತದೆ, ಇದನ್ನು ವಿಭವಎನ್ನುವರು.

# ವಾಹಕದ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಏಕಮಾನ ಧನ ಆವೇಶವನ್ನು ಸ್ಥಾನ ಪಲ್ಲಟ ಗೊಳಿಸಿದಾಗ ನಡೆದ ಕೆಲಸವನ್ನು ಆ ಬಿಂದುಗಳ ನಡುವಿನ ವಿಭಾವಂತರ ಎನ್ನುವರು. ಇದನ್ನು ವೋಲ್ಟ್ ಎಂಬ ಮೂಲಮಾನದಿಂದ ಅಳೆಯುವರು. ಒಂದು ವೋಲ್ಟನ್ನು ಒಂಧು ಜೌಲ್ ಮರ್ ಕೂಲಮ್ ಎಂದು ತಿಳಿಯಬಹುದು.

1. ವಿದ್ಯುತ್ ಕ್ಷೇತ್ರದ ಎರಡು ಬಿಂದುಗಳ ಮೂಲಕ ಐದು ಕೂಲಮ್ ಆವೇಶ ಪ್ರವಹಿಸುವಂತೆ ಮಾಡಲು 30 ಜೂಲ್ ನಷ್ಟು ಕೆಲಸ ಮಾಡಬೇಕಾದರೆ ಆ ಬಿಂದುಗಳ: ನಡುವಿನ ವಿಭವಾಂತರ ಎಷ್ಟು?

V=W/Q

V = 30/5

V = 6 ವೋಲ್ಟ್

Post a Comment

2 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)