ಭೂಮಿಯ ಅಂತರಾಳದ ರಚನೆ ಮತ್ತು ಸಂಯೋಜನೆ

★ಭೂಮಿಯ ಅಂತರಾಳದ ರಚನೆ ಮತ್ತು ಸಂಯೋಜನೆ

°●°ಇದನ್ನು ಮೂರು ಪ್ರಮುಖ ಪದರುಗಳನ್ನಾಗಿ ವಿಂಗಡಿಸಲಾಗಿದೆ

★ಭೂಕವಚ

°●° ಇದು ಸಿಲಿಕ , ಅಲ್ಯೂಮಿನಿಯಂ ಮತ್ತು ಮೆಗ್ನಿಷಿಯಂ ಗಳಿಂದ ಕೂಡಿದೆ ಇದನ್ನು ಶಿಲಾಗೋಳ ಎನ್ನುವರು

°●°ಭೂಮಿಯ ಮೇಲ್ಭಾಗದಿಂದ "60 ಕಿಲೋಮೀಟರ್ " ಆಳದ ವರೆಗೆ ವಿಸ್ತರಿಸಿದೆ

°●°ಈ ಪದದ ಮೇಲ್ಭಾಗವು ಹಗುರವಾಗಿದ್ದು ಸಿಲಿಕ ಮತ್ತು ಅಲ್ಯೂಮಿನಿಯಂಗಳಿಂದ ಕೂಡಿರುವುದರಿಂದ ಇದನ್ನು "ಸಿಯಾಲ್ " ಎಂದು ಕರೆಯುವರು

°●°ಇದರ ಕೆಳ ಭಾಗವು ಸಿಲಿಕ ಮತ್ತು ಮೆಗ್ನಿಸಿಯಂಗಳಿಂದ ಕೂಡಿರುವುದರಿಂದ "ಸೈಮಾ"ಎಂದು ಕರೆಯುವರು

★ಮ್ಯಾಂಟಲ್

°●°ಮ್ಯಾಂಟಲ್ ಭೂಮಿಯಿಂದ ಸುಮಾರು "2,900 ಕಿಲೋಮೀಟರ್" ಆಳದ ವರೆಗೆ ವಿಸ್ತರಿಸಿದೆ

°●°ಇದರ ಮೇಲ್ಪದರದಲ್ಲಿ ವಸ್ತುಗಳು ಭಾಗಶಃ ದ್ರವ ಮತ್ತು ಘನ ಸ್ಥಿತಿಯಲ್ಲಿರುವುದರಿಂದ ಇದನ್ನು ಶಿಲಾಪಾಕ ಎಂದು ಕರೆಯುವರು

◆ಮ್ಯಾಂಟಲ್ ನಲ್ಲಿ ಎರಡು ಭಾಗಗಳಿವೆ

°●°ಮ್ಯಾಂಟಲ್ ನ ಮೇಲ್ಪದರು ಅಥವಾ
"ಏಸ್ತೆನೋಸ್ಪಿಯರ್"
°●°ಮ್ಯಾಂಟಲ್ ಕೆಳಪದರು ಅಥವಾ "ಮೆಸಾಸ್ಪಿಯರ್ "

■ಭೂಕವಚ ಮತ್ತು ಮ್ಯಾಂಟಲ್ ಸಂಧಿಸುವ ಸೀಮಾ ವಲಯವನ್ನು "ವೊಹೊರೊವಿಸಿಕ್ ಒಥವಾ ವೋಹೋ" ಎನ್ನುವರು

■ಮ್ಯಾಂಟಲ್ ಮತ್ತು ಕೇಂದ್ರಗಳನ್ನು ಬೇರ್ಪಡಿಸುವ ಗಡಿಯನ್ನು "ಗುಟೆನ್ ಬರಗ್ ಸೀಮಾವಲಯ" ಎನ್ನುವರು

★ಕೇಂದ್ರ ಗೋಳ

°●°ಇದು ಭೂಮಿಯ ಮ
ಮೇಲ್ಮೈನಿಂದ "6371 km" ಅಳದವರಿಗೆ ವಿಸ್ತರಿಸಿದೆ

°●°ಕೇಂದ್ರಗೋಳವು ಪ್ರಧಾನವಾಗಿ "ನಿಕ್ಕಲ್ ಮತ್ತು ಕಬ್ಬಿಣ" ಹೊಂದಿರುವುದರಿಂದ ಇದನ್ನು ಸಾಂಕೇತಿಕವಾಗಿ "ನಿಫೆ" ಎನ್ನುವರು

◆ಇದು ಎರಡು ಉಪ ವಲಯಗಳನ್ನು ಹೊಂದಿದೆ

°●°ಹೊರ ಕೇಂದ್ರ
°●°ಒಳ ಕೇಂದ್ರ

Post a Comment

0 Comments