ಅಂಗಾಂಶಗಳ ಅಧ್ಯಯನ : ಅಂಗಾಂಶಗಳಲ್ಲಿ ಎಷ್ಟು ವಿಧ ..?

ಅಂಗಾಂಶಗಳ ಅಧ್ಯಯನ : ಅಂಗಾಂಶಗಳಲ್ಲಿ ಎಷ್ಟು ವಿಧ ..?

*ಅಂಗಾಂಶ ಎಂದರೇನು.. ?*
=================
*ಒಂದೇ ರೀತಿಯ ರಚನೆ ಇರುವ ಒಂದೇ ರೀತಿ ಕಾರ್ಯ ಮಾಡುವ ಒಂದೇ ಮೂಲದಿಂದ ಹುಟ್ಟಿದ ಜೀವಕೋಶಗಳ ಗುಂಪೇ ‘ಅಂಗಾಂಶ‘.ಅಂಗಾಂಶಗಳು ಸಸ್ಯ ಮತ್ತು ಪ್ರಾಣಿಗಳಲ್ಲಿ ಕಂಡುಬರುತ್ತವೆ. ಸಸ್ಯ ಮತ್ತು ಪ್ರಾಣಿಗಳು ಅನೇಕ ವಿಧದ ಅಂಗಾಂಶಗಳಿಂದಾಗಿವೆ. ಉದಾ: ಮೂಳೆಯ ಜೀವಕೋಶಗಳು ಸೇರಿ ಮೂಳೆ ಅಂಗಾಂಶವಾಗುತ್ತದೆ. ಸ್ನಾಯು ಅಂಗಾಂಶವು ಸ್ನಾಯುಕೋಶಗಳಿಂದಾಗಿದೆ. ವಿವಿಧ ಅಂಗಾಂಶಗಳು ಅವುಗಳ ಕಾರ್ಯಕ್ಕೆ ಅನುಗುಣವಾದ ರಚನೆಯನ್ನು ಹೊಂದಿರುತ್ತದೆ. ಸಸ್ಯ ಅಂಗಾಂಶಗಳು ಪ್ರಾಣಿ ಅಂಗಾಂಶಗಳಿಗಿಂತ ಭಿನ್ನವಾಗಿರುವುದನ್ನು ನೋಡುತ್ತೇವೆ.*

*> ಅಂಗಾಂಶಗಳ ಬಗ್ಗೆ ಅಧ್ಯಯನ ಮಾಡುವುದೇ ಅಂಗಾಂಶ ಶಾಸ್ತ್ರ(ಹಿಸ್ಟಾಲಜಿ).*

# *ಅಂಗಾಂಶಗಳ ವಿಧಗಳು : ಸಸ್ಯ ಅಂಗಾಂಶ ಮತ್ತು ಪ್ರಾಣಿ ಅಂಗಾಂಶ*
* *ಸಸ್ಯ ಅಂಗಾಂಶ: ಸಸ್ಯ ಅಂಗಾಂಶಗಳನ್ನು ಮೂಲತಃ ಎರಡು ಮೂಲ ಗುಂಪುಗಳಾಗಿ ವಿಂಗಡಿಸಬಹುದು ವರ್ಧನ ಅಂಗಾಂಶಗಳು ಮತ್ತು ಶಾಶ್ವತ ಅಂಗಾಂಶಗಳು.*

*  ಪ್ರಾಣಿ ಅಂಗಾಂಶಗಳು : ಪ್ರಾಣಿಗಳಲ್ಲಿ ನಾಲ್ಕು ಬಗೆಯ ಮೂಲ ಅಂಗಾಂಶಗಳಿವೆ. ಅನುಲೇಪಕ / ಅಂಗಾಂಶ / ಸ್ನಾಯು ಅಂಗಾಂಶ / ಸಂಯೋಜಕ ಅಂಗಾಂಶ / ನರ ಅಂಗಾಂಶ*

# *1.ಸಸ್ಯ ಅಂಗಾಂಶಗಳು: ಸಸ್ಯ ಅಂಗಾಂಶಗಳ 2 ವಿಧಗಳೆಂದರೆ,*

*1. ವರ್ಧನಾ ಅಂಗಾಂಶ: ಇದು ಜೀವಂತ ಜೀವಕೋಶಗಳಿಂದ ಕೂಡಿವೆ ಇವು ನಿರಂತರ ಕೋಶ ವಿಭಜನಾ ಶಕ್ತಿಯನ್ನು ಹೊಂದಿದೆ. ಈ ಅಂಗಾಂಶಗಳನ್ನು ವಿಭಜನ ಶಕ್ತ(ಮೆರಿಸ್ಟಮ್) ಎನ್ನುವರು. ಇವು ಸಸ್ಯದ ಉದ್ದ ಮತ್ತು ಗಾತ್ರವನ್ನು ಹೆಚ್ಚಿಸಲು ಕಾರಣವಾಗಿದೆ.*
*2. ಶಾಶ್ವತ ಅಂಗಾಂಶಗಳು: ಇವುಗಳಲ್ಲಿ 2 ವಿಧ*

*1. ಸರಳ ಶಾಶ್ವತ ಅಂಗಾಂಶ: ಒಂದೇ ರೀತಿಯ ಜೀವಕೋಶಗಳಿಂದ ಮಾಡಲ್ಪಟ್ಟಿದೆ.*

*ಎ) ಪೇರಂಕೈಮಾ: ಸಸ್ಯದ ಮೃದುಭಾಗಗಳಲ್ಲಿ ಕಂಡು ಬರುತ್ತದೆ. ಇವು ತೆಳುವಾದ ಕೋಶ ಭಿತ್ತಿಯನ್ನು ಹೊಂದಿದ್ದು ಕೋಶವಿಭಜನಾ ಶಕ್ತಿಯನ್ನು ಉಳಿಸಿಕೊಂಡಿವೆ. ಇದು ಸಾಮಾನ್ಯವಾಗಿ ನೀರು ಹೀರಿಕೊಳ್ಳುವ ಮತ್ತು ನೀರು ಹಾಗೂ ಆಹಾರ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತದೆ.*
=============
*ಬಿ) ಕೋಲರಿಂಕೈಮಾ: ಕೋಶಗಳು ಒತ್ತಾಗಿ ಜೋಡನೇಯಾಗಿವೆ, ಪೇರಂ ಕೈಮಾ ಆಧಾರ ಅಂಗಾಂಶವಾಗಿ ಕಾರ್ಯನಿರ್ವಹಿಸುತ್ತದೆ.*
==============
*ಸಿ) ಸ್ಲೀರಂಕೈಮಾ: ಇದು ನಿರ್ಜಿವ ಕೋಶಗಳನ್ನು ಒಳಗೊಂಡಿದೆ. ಕಾಯಿಗಳ ಗಟ್ಟಿ ಭಾಗಗಳು ಕಾಯಿಗಳ ಗಟ್ಟಿಕವಚಗಳಲ್ಲಿ(ಚಿಪ್ಪು) ಇರುವ ಅನಿಯತ ಆಕೃತಿಯ ಸ್ಲೀರಂಕೈಮಾವನ್ನು ಸ್ಲೀರೈಡ್‍ಗಳು ಎನ್ನುವರು.*

*2. ಸಂಕೀರ್ಣವ ಶಾಶ್ವತ ಅಂಗಾಂಶ:*

*ಎ) ಕ್ಸೈಲಂ: ಇದು ಸಸ್ಯದ ಜಲವಾಹಕ ಅಂಗಾಂಶ. ಇದು 4 ವಿಧದ ಜೀವಕೋಶಗಳಿಂದ ಮಾಡಲ್ಪಟ್ಟಿದೆ.*

*ಬಿ) ಪ್ಲೋಯಂ: ಇದು ಸಸ್ಯದ ಆಹಾರವಾಹಕ ಅಂಗಾಂಶ ಇದು 4 ವಿಧದ ಜೀವಕೋಶಗಳಿಂದ ಮಾಡಲ್ಪಟ್ಟಿದೆ.*

*ಸಿ) ಹೊರಧರ್ಮ: (ಎಪಿಡರ್ಮಲ್ ಅಂಗಾಂಶ) ಸಸ್ಯದ ಎಲ್ಲಾ ಭಾಗಗಳನ್ನು ಸಂಪೂರ್ಣವಾಗಿ ಆವರಿಸಿದೆ ಇದರ ಹೊರಮೈ ಮೇಲೆ ಕ್ಯೂಟಿಕಲ್ ಪದರ ಇದೆ.*

# *2.ಪ್ರಾಣಿ ಅಂಗಾಂಶಗಳು: ಇದರಲ್ಲಿ 4 ವಿಧಗಳೆಂದರೆ*
*1. ಅನುಲೇಪಕ ಅಂಗಾಂಶ:*

• *ಸರಳ ಅನುಲೇಪಕ ಅಂಗಾಂಶದ ಕೊಶಗಳು ಚಪ್ಪಟೆಯಾಗಿದ್ದರೆ ಶಲ್ಯಕ ಅನುಲೇಪಕ ಅಂಗಾಂಶ ಎನ್ನುವರು. ಇವು ಪುಪ್ಪಸದ ಆಲ್ವಿಯೋಲೈ ಮತ್ತು ಅನ್ನನಾಳದಲ್ಲಿವೆ.*
• *ರಕ್ತನಾಳ, ಲೋಮನಾಳ, ಹೃದಯದಲ್ಲಿ ಕಂಡುಬರುವ ಚಪ್ಪಟೆ(ಸಲ್ಯಕ) ಅನುಲೇಪಕ ಅಂಗಾಂಶಗಳನ್ನು ಎಂಡೋಥಿಲಿಯಮ್ ಎನ್ನುವರು.*
• *ಸ್ತಂಭಾಕಾರದಲ್ಲಿರುವ ಸ್ತಂಭ ಅನುಲೇಪಕ ಅಂಗಾಂಶವು ಸಣ್ಣ ಕರುಳಿನ ಒಳಪದರ ಧ್ವನಿಪೆಟ್ಟಿಗೆ, ಗಂಟಲು ಮತ್ತು ಅಂಡವಾಹಿನಿಯಲ್ಲಿ ಕಂಡುಬರುತ್ತದೆ ಗ್ರಂಥಿಗಳ ಸ್ರವಿಕೆಯ ಭಾಗಗಳಲ್ಲಿ ಘನಾಕೃತಿಯ ಅಂಗಾಂಶವು ಕಂಡು ಬರುತ್ತದೆ.*

*2. ಸ್ನಾಯು ಅಂಗಾಂಶ; ಕದುರಿನಾಕಾರದಲ್ಲಿರುವ, ಅಡ್ಡಗೆರೆಗಳಿಲ್ಲದೆ, ಅನೈಚ್ಚಿಕ ಸ್ನಾಯುಗಳನ್ನು ಪಟ್ಟಿ ರಹಿತ ಸ್ನಾಯುಗಳು ಎನ್ನುವರು. ಇವು ಜೀರ್ಣಾಗಗಳು ರಕ್ತನಾಳಗಳು ಮಂತ್ರಕೋಶಗಳ ಮತ್ತು ಗ್ರಂಥಿನಾಳಗಳಲ್ಲಿ ಕಂಡು ಬರುತ್ತವೆ. ಕೊಳವೆಯಾಕಾರದಲ್ಲಿರುವ, ಅಡ್ಡಗೆರೆಗಳಿರುವ ಐಚ್ಚಿಕ ಸ್ನಾಯುಗಳೇ ಪಟ್ಟಿ ಸಹಿತ ಸ್ನಾಯುಗಳು. ಇವು ಕೈಕಾಲುಗಳಲ್ಲಿ ಇದ್ದು ಚಲನೆಗೆ ಸಹಾಯ ಮಾಡುತ್ತವೆ. ಸುಲಭವಾಗಿ ಆಯಾಸಗೊಳ್ಳದ ವಿಶೇಷ ಸ್ನಾಯುಗಳೇ ಹೃದಯದ ಸ್ನಾಯುಗಳು.*

*3.ಸಂಯೋಜಕ ಅಂಗಾಂಶ: ದೇಹದ ವಿವಿಧ ಅಂಗಾಂಶಗಳನ್ನು ಬಂಧಿಸಲು ಮತ್ತು ಆಧಾರ ರಚನೆಗಳನ್ನು ಹೊಂದಿರುವ ಅಂಗಾಂಶ ಸಂಯೋಜಕ ಅಂಗಾಂಶ.*
* *ಎ) ಏರಿಯೋಲಾರ್ ಅಂಗಾಂಶ: ಇದು ಚರ್ಮದ ಕೆಳ ಭಾಗದಲ್ಲಿ ಕಂಡುಬರುತ್ತದೆ. ರಕ್ತದಲ್ಲಿರುವ ಪೋಷಕಾಂಶಗಳು ಮತ್ತು ಆಮ್ಲಜನಕ ಈ ಅಂಗಾಂಶದ ಮೂಲಕ ಹಾದು ಇತರೆ ಅಂಗಾಂಶಗಳಿಗೆ ಹೋಗುತ್ತದೆ.*
> *ಅಡಿಪೋಸ್ ಅಂಗಾಂಶ: ಇದರಲ್ಲಿ ಕೊಬ್ಬು ಸಂಗ್ರಹವಾಗಿದೆ. ಇದು ಉಷ್ಣನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉಪವಾಸ ಸಂಧರ್ಭದಲ್ಲಿ ದೇಹಕ್ಕೆ ಪುಷ್ಟಿ ಕೊಡುತ್ತದೆ.*
> *ಜಾಲರೂಪಿ ತಂತುಗಳ ಅಂಗಾಂಶ: ಇದು ದೇಹದ ಕೆಲವು ಅಂಗಾಂಶಗಳಿಗೆ ಆಧಾರ ಕೊಡುತ್ತದೆ.*
>  *ಸ್ನಾಯು ರಜ್ಜು: ಮೂಳೆಗಳನ್ನು ಒಂದಕ್ಕೊಂದು ಬಂಧಿಸುತ್ತದೆ.*
>  *ತಂತು ಕಟ್ಟು: ಸ್ನಾಯುಗಳನ್ನು ಮೂಲೆಗಳಿಗೆ ಬಂಧಿಸುತ್ತದೆ.*
* *ಬಿ) ದಟ್ಟ ಸಂಯೋಜಕ ಅಂಗಾಂಶ:*
> *ಮೃದ್ವಸ್ವಿ ಅಂಗಾಂಶ: ಮೃದುವಾಗಿದೆ ಬಾಗಲೂಬಹುದು, ಹಿಗ್ಗಲೂಬಹುದು ಮೂಗಿನ ತುದಿ, ಹೊರಕಿವಿಯ ಆಲಿಕೆ, ಕಶೇರು ಮಣಿಗಳ ನಡುವಿನ ಫಲಕಗಳಲ್ಲಿ ಕಂಡುಬರುತ್ತದೆ.*
> *ಮೂಳೆ ಅಂಗಾಂಶ: ದೇಹಕ್ಕೆ ಆಧಾರ, ಆಕಾರ ರಕ್ಷಣೆ ಮತ್ತು ಚಲನೆಯಲ್ಲಿ ಸಹಾಯ ಮಾಡುವ ಅಂಗಾಂಶ ದೇಹದ ಒಟ್ಟಾರೆ ತೂಕದ ಹೆಚ್ಚಿನ ಭಾಗ ಮೂಲೆಗಳಿಂದಾಗಿದೆ. ಮೂಲೆಗಳ ಒಳಬಾಗದಲ್ಲಿ ಅಸ್ತಿಮಜ್ಜೆಯಿದ್ದು ಇಲ್ಲಿ ರಕ್ತಕಣಗಳು ಉತ್ಪತ್ತಿಯಾಗುತ್ತವೆ.*
* *ಸಿ) ದ್ರವರೂಪ ಸಂಯೋಜಕ ಅಂಗಾಂಶ:*
================
> *ರಕ್ತ: ರಕ್ತದಲ್ಲಿ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಕಿರುತಟ್ಟೆಗಳು, ಪ್ಲಾಸ್ಮವೆಂಬ ದ್ರವದಲ್ಲಿ ಇದ್ದು ವಿವಿಧ ಕಾರ್ಯಗಳನ್ನು ಮಾಡುತ್ತವೆ.*
> *ದುಗ್ದರಸ: ರಕ್ತವನ್ನು ಹೋಲುವ ಆದರೆ ಬಣ್ಣವಿಲ್ಲದೆ ದ್ರವವೇ ದುಗ್ದರಸ ಇದು ದೇಹದ ರಕ್ಷಣಾ ಕಾರ್ಯದಲ್ಲಿ ಭಾಗವಹಿಸುತ್ತದೆ.*

*4.ನರ ಅಂಗಾಂಶ: ದೇಹಕ್ಕೆ ಪ್ರಚೇತನವನ್ನು ಉಂಟುಮಾಡುವ ಅಂಗಾಂಶವಿದು. ನರ ಅಂಗಾಂಶದ ರಚನೆಯ ಹಾಗೂ ಕ್ರಿಯೆಯ ಮೂಲ ಘಟಕವೇ ನರಕೋಶ(ನ್ಯೂರಾನ್) ನ್ಯೂರಾನ್‍ನಲ್ಲಿ ನ್ಯೂಕ್ಲಿಯಸ್ ಇರುವ ಸ್ಪಷ್ಟ ಭಾಗವೇ ಕೋಶಕಾಯ. ಕೋಶಕಾಯದ ಸುತ್ತಲಿರುವ ಬೆರಳಿನಾಕಾರದ ರಚನೆಗಳೇ ಡೆಂಡೈಟ್‍ಗಳು ಉದ್ದವಾದ ಡೆಂಡ್ರೈಟನ್ನು ಆಕ್ಸಾನ್ ಎನ್ನುವರು.*

Post a Comment

1 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)