ರೈಬೋಸೋಮ್

🅑🅘🅞🅛🅞🅖🅨 🅑🅔🅐🅤🅣🅨

ರೈಬೋಸೋಮ್ೲೲೲ

ರೈಬೋಸೋಮ್‌‌ಗಳು ಜೀವಕೋಶಗಳ ಅಂಗಭಾಗಗಳಾಗಿದ್ದು, ಅಮೈನೋ ಆಮ್ಲಗಳಿಂದ ಪ್ರೋಟೀನುಗಳನ್ನು ಅವು ತಯಾರಿಸುತ್ತವೆ. "ಪ್ರಧಾನ ತತ್ತ್ವ" ಎಂಬುದಾಗಿ ಅನೇಕವೇಳೆ ಉಲ್ಲೇಖಿಸಲ್ಪಡುವ ಜೀವಶಾಸ್ತ್ರದ ಪ್ರಧಾನ ಸೂತ್ರಗಳಲ್ಲಿ ಒಂದೆಂದರೆ, RNAಯನ್ನು ರೂಪಿಸಲು DNAಯು ಬಳಸಲ್ಪಡುತ್ತದೆ, ಮತ್ತು ಸದರಿ RNAಯು ಪ್ರೋಟೀನನ್ನು ರೂಪಿಸಲು ಅನುಕ್ರಮವಾಗಿ ಬಳಸಲ್ಪಡುತ್ತದೆ. ಜೀನ್‌‌‌‌ಗಳಲ್ಲಿನ DNA ಸರಣಿಯನ್ನು ಒಂದು ಸಂದೇಶವಾಹಕ RNAಯೊಳಗೆ (mRNA) ನಕಲು ಮಾಡಲಾಗುತ್ತದೆ. ರೈಬೋಸೋಮ್‌‌ಗಳು ನಂತರ ಈ RNAಯಲ್ಲಿರುವ ಮಾಹಿತಿಯನ್ನು ಓದುತ್ತವೆ ಮತ್ತು ಪ್ರೋಟೀನುಗಳನ್ನು ಸೃಷ್ಟಿಸಲು ಅದನ್ನು ಬಳಸಿಕೊಳ್ಳುತ್ತವೆ. ಈ ಪ್ರಕ್ರಿಯೆಯನ್ನು ರೂಪಾಂತರ (ತಳಿಶಾಸ್ತ್ರ) ಎಂದು ಕರೆಯಲಾಗುತ್ತದೆ, ಅಂದರೆ, RNAಯಿಂದ ಪಡೆದ ತಳೀಯ ಮಾಹಿತಿಯನ್ನು ಪ್ರೋಟೀನುಗಳಾಗಿ ರೈಬೋಸೋಮ್‌‌ "ರೂಪಾಂತರಿಸುತ್ತದೆ". ರೈಬೋಸೋಮ್‌‌ಗಳು ತಾವು ಒಂದು mRNAಗೆ ಬಂಧಿಸಲ್ಪಡುವ ಮೂಲಕ ಮತ್ತು ಒಂದು ನಿರ್ದಿಷ್ಟ ಪ್ರೋಟೀನಿನಲ್ಲಿನ ಅಮೈನೋ ಆಮ್ಲಗಳ ಸರಿಯಾದ ಸರಣಿಗೆ ಸಂಬಂಧಿಸಿದ ಒಂದು ಪಡಿಯಚ್ಚಾಗಿ ಇದನ್ನು ಬಳಸುವ ಮೂಲಕ ಈ ಕಾರ್ಯವನ್ನು ನೆರವೇರಿಸುತ್ತವೆ. ವರ್ಗಾವಣೆ RNA (tRNA) ಕಣಗಳಿಗೆ ಅಮೈನೋ ಆಮ್ಲಗಳು ಜೋಡಿಸಲ್ಪಡುತ್ತವೆ, ಮತ್ತು ಈ ಕಣಗಳು ರೈಬೋಸೋಮ್‌‌ನ ಒಂದು ಭಾಗವನ್ನು ಪ್ರವೇಶಿಸಿ, ಸಂದೇಶವಾಹಕ RNA ಸರಣಿಗೆ ಬಂಧಿಸಲ್ಪಡುತ್ತವೆ. ಜೋಡಿಸಲ್ಪಟ್ಟ ಅಮೈನೋ ಆಮ್ಲಗಳ ಜೊತೆಗೆ ನಂತರ ರೈಬೋಸೋಮ್‌ನ ಮತ್ತೊಂದು ಭಾಗವು ಸೇರಿಕೊಳ್ಳುತ್ತದೆ. ರೈಬೋಸೋಮ್‌ mRNAಯ ಉದ್ದಕ್ಕೂ ಚಲಿಸುತ್ತಾ ಅದರ ಸರಣಿಯನ್ನು "ಓದುತ್ತದೆ" ಮತ್ತು ಅಮೈನೋ ಆಮ್ಲಗಳ ಒಂದು ಸರಪಳಿಯನ್ನು ರೂಪಿಸುತ್ತದೆ.

RNAಗಳು ಮತ್ತು ಪ್ರೋಟೀನುಗಳ ಸಂಕೀರ್ಣಗಳಿಂದ ರೈಬೋಸೋಮ್‌ಗಳು ಮಾಡಲ್ಪಟ್ಟಿವೆ. ರೈಬೋಸೋಮ್‌‌ಗಳು ಎರಡು ಉಪಘಟಕಗಳಾಗಿ ವಿಭಜಿಸಲ್ಪಟ್ಟಿದ್ದು, ಅವುಗಳಲ್ಲಿ ಒಂದು ಮತ್ತೊಂದಕ್ಕಿಂತ ದೊಡ್ಡದಾಗಿರುತ್ತದೆ. ಸಣ್ಣದಾಗಿರುವ ಉಪಘಟಕವು mRNAಗೆ ಬಂಧಿಸಲ್ಪಟ್ಟರೆ, ದೊಡ್ಡದಾದ ಉಪಘಟಕವು tRNA ಮತ್ತು ಅಮೈನೋ ಆಮ್ಲಗಳಿಗೆ ಬಂಧಿಸಲ್ಪಡುತ್ತದೆ. ಒಂದು ರೈಬೋಸೋಮ್‌ ಒಂದು mRNAಯನ್ನು ಓದುವುದನ್ನು ಮುಗಿಸಿದಾಗ, ಈ ಎರಡು ಉಪಘಟಕಗಳು ಸೀಳಿ ಬೇರ್ಪಡುತ್ತವೆ. ಅಮೈನೋ ಆಮ್ಲಗಳನ್ನು ಒಟ್ಟಾಗಿಸಿ ಜೋಡಿಸುವ ಪೆಪ್ಟಿಡೈಲ್‌‌ ಟ್ರಾನ್ಸ್‌‌ಫರೇಸ್‌‌ ಕಾರ್ಯಚಟುವಟಿಕೆಗೆ ಸಂಬಂಧಿಸಿದಂತೆ ರೈಬೋಸೋಮ್‌ನ RNAಯು ಅತ್ಯಂತ ಮುಖ್ಯವಾಗಿ ಕಂಡುಬರುವುದರಿಂದ, ರೈಬೋಸೋಮ್‌‌ಗಳು ರೈಬೋಸೈಮ್‌ಗಳಾಗಿ ವರ್ಗೀಕರಿಸಲ್ಪಟ್ಟಿವೆ.

ಬ್ಯಾಕ್ಟೀರಿಯಾ, ಆರ್ಕಿಯಾ ಮತ್ತು ಯೂಕ್ಯಾರಿಯೋಟ್‌‌‌ಗಳಿಗೆ (ಭೂಮಿಯ ಮೇಲಿನ ಜೀವರಾಶಿಯ ಮೂರು ತಾಣಗಳು) ಸೇರಿರುವ ರೈಬೋಸೋಮ್‌‌ಗಳು ಗಮನಾರ್ಹವಾಗಿ ವಿಭಿನ್ನವಾಗಿರುವ ರಚನೆ ಮತ್ತು RNA ಸರಣಿಗಳನ್ನು ಹೊಂದಿರುತ್ತವೆ. ಬ್ಯಾಕ್ಟೀರಿಯಾಗಳ ರೈಬೋಸೋಮ್‌‌ಗಳನ್ನು ಪ್ರತಿಬಂಧಿಸುವ ಮೂಲಕ ಕೆಲವು ಬ್ಯಾಕ್ಟೀರಿಯಾಗಳನ್ನು ಪ್ರತಿಜೀವಕಗಳು ಸಾಯಿಸಲು ರಚನೆಯಲ್ಲಿನ ಈ ಭಿನ್ನತೆಗಳು ಅವಕಾಶ ಮಾಡಿಕೊಟ್ಟರೆ, ಮಾನವ ರೈಬೋಸೋಮ್‌‌ಗಳು ಪ್ರಭಾವಕ್ಕೊಳಪಡದೆ ಉಳಿಯುತ್ತವೆ. ಯೂಕ್ಯಾರಿಯೋಟಿಕ್‌‌ ಜೀವಕೋಶಗಳ ಮೈಟೋಕಾಂಡ್ರಿಯಾದಲ್ಲಿನ ರೈಬೋಸೋಮ್‌‌ಗಳು ಬ್ಯಾಕ್ಟೀರಿಯಾದಲ್ಲಿನ ರೈಬೋಸೋಮ್‌‌ಗಳನ್ನು ಹೋಲುತ್ತವೆ; ಇದು ಈ ಅಂಗಕದ ವಿಕಾಸಾತ್ಮಕ ಹುಟ್ಟನ್ನು ಪ್ರತಿಬಿಂಬಿಸುತ್ತದೆ.[೧] ರೈಬೋ ನ್ಯೂಕ್ಲಿಯಿಕ್‌‌ ಆಮ್ಲ ಮತ್ತು ಗ್ರೀಕ್ ಭಾಷೆಯ ಸೋಮಾ (ಕಾಯ ಎಂದು ಅರ್ಥ) ಎಂಬ ಶಬ್ದದಿಂದ ರೈಬೋಸೋಮ್‌‌ ಎಂಬ ಪದವು ಬಂದಿದೆ.

Post a Comment

0 Comments