ಚಲನೆ

ಚಲನೆ

ಚಲನೆ ಒಂದು ವಸ್ತುವಿನ ಸ್ಥಾನ ಪಲ್ಲಟವನ್ನು ಚಲನೆ ಎನ್ನಬಹುದು. ಚಲನೆ ಎನ್ನುವುದು ಒಂದು ನಿರಪೇಕ್ಷ ಶಬ್ದವಾಗಿರದೆ ಸಾಪೇಕ್ಷ ಶಬ್ದವಾಗಿದೆ. ಏಕೆಂದರೆ ಒಂದು ವಸ್ತುವು ಇನ್ನೊಂದು ವಸ್ತುವಿನ ಹೋಲಿಕೆಯಲ್ಲಿ ಚಲನೆಯಲ್ಲಿದ್ದರೂ ಮೂರನೆಯ ವಸ್ತುವಿನ ಹೋಲಿಕೆಯಲ್ಲಿ ನಿಶ್ಚಲ ವಾಗಿರಬಹುದು. ಪ್ರಪಂಚದಲ್ಲಿ ಎಲ್ಲ ವಸ್ತುಗಳೂ ಚಲನೆಯಲ್ಲಿರುತ್ತವೆ. ಭೂಮಿಸೂರ್ಯಪ್ರಪಂಚವಷ್ಟೇ ಅಲ್ಲದೆ ಪರಮಾಣುವಿನಲ್ಲಿರುವ ಪ್ರೋಟಾನ್,
ಎಲೆಕ್ಟ್ರಾನ್ ಎಲ್ಲವೂ ಚಲನೆಯಲ್ಲಿರುತ್ತವೆ.

ಚಲನೆಯ ನಿಯಮಗಳು

ಚಲನೆಯ ನಿಯಮಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು.

ಬೃಹದಾಕಾರ ವಸ್ತುಗಳ(ಉದಾ. ಗ್ರಹಗಳು, ಮನುಷ್ಯರು) ಚಲನೆಯನ್ನು ಕ್ಲಾಸಿಕಲ್ ಮೆಕ್ಯಾನಿಕ್ಸ್(ಶಾಸ್ತ್ರೀಯ ಯಂತ್ರಶಾಸ್ತ್ರ) ಎಂದೂ ಮತ್ತುಕಣಗಳ(ಉದಾ. ಪರಮಾಣು) ಚಲನೆಯನ್ನು ಕ್ವಾಂಟಮ್ ಮೆಕ್ಯಾನಿಕ್ಸ್(ಪರಿಮಾಣ ಯಂತ್ರಶಾಸ್ತ್ರ) ಎಂದೂ ಕರೆಯುತ್ತಾರೆ.

ಕ್ಲಾಸಿಕಲ್ ಮೆಕ್ಯಾನಿಕ್ಸ್(ಶಾಸ್ತ್ರೀಯ ಯಂತ್ರಶಾಸ್ತ್ರ)

ವಿಶ್ವದಲ್ಲಿನ ಬೃಹದಾಕಾರ ವಸ್ತುಗಳಾದ ದೊಡ್ಡ ದೊಡ್ಡ ಯಂತ್ರಗಳ, ಗ್ರಹಗಳ, ನಕ್ಷತ್ರಗಳ, ನಕ್ಷತ್ರ ಕೂಟಗಳ, ಅಂತರಿಕ್ಷ ವಾಹನಗಳ ಚಲನೆಯನ್ನು ಕ್ಲಾಸಿಕಲ್ ಮೆಕ್ಯಾನಿಕ್ಸ್ ನಿಯಮದಲ್ಲಿ ವಿವರಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕ್ಲಾಸಿಕಲ್ ಮೆಕ್ಯಾನಿಕ್ಸ್ ನ ವಿಷಯ ತುಂಬಾ ಪುರಾತನ ಮತ್ತು ಅಗಾದವದುದು.ಈ ನಿಯಮಗಳು ವಸ್ತುಗಳ ಮೇಲಿನ ಪ್ರಭಾವ ಮತ್ತು ಅವುಗಳ ಚಲನೆಯ ಸಂಬಂಧವನ್ನು ವಿವರಿಸುತ್ತವೆ. Sir Isaac Newton ಈ ನಿಯಮಗಳ ಬಗ್ಗೆ ೫ ಜುಲೈ೧೯೮೭ ರಲ್ಲಿ ಪ್ರಕಟಿತವಾದ Philosophiæ Naturalis Principia Mathematica ಎಂಬ ಪ್ರಬಂದಲ್ಲಿ ಮೊದಲಬಾರಿಗೆ ವಿವರಿಸಿದ್ದಾನೆ. Sir Isaac Newton ನಿಯಮಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗಿದೆ.

1)ಯಾವುದೇ ವಸ್ತುವು ಬಾಹ್ಯ ಬಲ ಪ್ರಭಾವ ಬೀರುವವರೆಗೂ ನಿಶ್ಚಲ ಅಥವಾ ತಟಸ್ಥ ವೇಗದಲ್ಲಿ ಚಲಿಸುತ್ತಿರುತ್ತವೆ.

2)ಯಾವುದೇ ವಸ್ತುವು ಬಾಹ್ಯ ಬಲ ಪ್ರಯೋಗ ಆಗುವವರೆಗೂ ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುತ್ತವೆ.

3)ಒಂದು ವಸ್ತುವು ಮತ್ತೊಂದು ವಸ್ತುವಿನ ಮೇಲೆ ಮಾಡುವ ಬಲ ಪ್ರಯೋಗವು ಪರಸ್ಪರ ಸಮಾನ ಮತ್ತು ವಿರುದ್ದವಾಗಿರುತ್ತವೆ.

ಉದಾಹರಣೆಗೆ: ಅ ಎಂಬ ವಸ್ತುವು ಇ ಎಂಬ ವಸ್ತುವಿನಮೇಲೆ ಬ ಎಂಬ ಬಲ ಪ್ರಯೋಗ ಮಾಡಿದಾಗ, ಇ ಎಂಬ ವಸ್ತುವು ಅ ಎಂಬ ವಸ್ತುವಿನಮೇಲೆ-ಬ ಎಂಬ ಸಮಾನ ಬಲದಿಂದ ಪ್ರತಿರೋದ ತೋರುತ್ತದೆ.

ಕ್ವಾಂಟಮ್ ಮೆಕ್ಯಾನಿಕ್ಸ್(ಪರಿಮಾಣ ಯಂತ್ರಶಾಸ್ತ್ರ)ಸಂಪಾದಿಸಿ

ಕ್ವಾಂಟಮ್ ಮೆಕ್ಯಾನಿಕ್ಸ್ ಧ್ರವ್ಯದ ಪರಮಾಣು ಮತ್ತು ಉಪ ಪರಮಾಣು ಗಳ ಭೌತಿಕ ಸ್ತಿತಿಯನ್ನುಯನ್ನು ಅರ್ಥೈಸುವ ಸಿದ್ದಾಂತಗಳ ಕಂತೆ. ಈ ಸಿದ್ದಾಂತಗಳು ದ್ರವ್ಯ ಮತ್ತು ವಿಕಿರಣ ಶಕ್ತಿಯು ಏಕಕಾಲದಲ್ಲಿ ತೋರುವ ಅಲೆ ಮತ್ತು ಕಣದ ರೂಪದ ನಡೆತೆಯನ್ನು ವಿವರಿಸುತ್ತವೆ,ಇದನ್ನು wave–particle duality ಅಲ್ಲಿ ವಿವರಿಸಲಾಗಿದೆ. ಇದಲ್ಲದೆ Superfluidityಅಧಿವಾಹಕತೆ(Superconductivity) ಮತ್ತು ಜೀವ ವಿಜ್ಞಾನದ ಪ್ರೋಟೀನ್ ಗಳ ರಚನೆ ಇತ್ಯಾದಿ ವಿಷಯಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ಕ್ಲಾಸಿಕಲ್ ಮೆಕ್ಯಾನಿಕ್ಸ್ ನಲ್ಲಿ ವಸ್ತುವಿನ ನಿಖರವಾದ ಅಳತೆ ಮತ್ತು ಭವಿಷ್ಯವನ್ನು ಲೆಕ್ಕಹಾಕಬಹುದು, ಉದಾಹರಣೆಗೆ ವಸ್ತುವಿನ ಸ್ತಾನ ಮತ್ತು ವೇಗ. ಆದರೆ ಕ್ವಾಂಟಮ್ ಮೆಕ್ಯಾನಿಕ್ಸ್ ನಲ್ಲಿ Heisenberg uncertaintyಸಿದ್ದಾಂತ ಹೇಳುವಂತೆ ಏಕಕಾಲದಲ್ಲಿ ಉಪಪಾರಮಣುವಿನ ಸಂಪೂರ್ಣ ಸ್ತಿತಿಯನ್ನು (ಸ್ತಾನ,ವೇಗ ..) ನಿರ್ದರಿಸಲಾಗುವುದಿಲ್ಲ

Post a Comment

0 Comments